O belagalihudado
- Title: O belagalihudado
- Genre: Sangha
- Language: Kannada
- Length: 4:51 minutes (4.44 MB)
- Format: MP3 Stereo 44kHz 128Kbps (CBR)
If you have the lyrics (words) of this song, please send it to us by submitting it in the comments section below. Thanks!
|
ಓ ಬೆಳಗಲಿಹುದದೋ ಭಾರತದ ಬಾನಂಚು
ಸತ್ತುರುಳುತಿದೆ ನಿಶಾಸುರನ ಸಂಚು
ಮೊಳಗುತಿದೆ ಸ್ಪೂರ್ತಿಯಲಿ ನೆಲದೊಕ್ಕೊರಲ ಕಂಚು
ಅರಳುತಿದೆ ಪ್ರೇರಣೆಯ ಲತೆಯ ಮಿಂಚು ||ಪ||
ಭುವಿಯಾಳಕಿಳಿದಿಳಿದು ಬೇರುಗಳ ಬಾಯಿಂದ
ನೆಲದೆದೆಯ ಪೀಯೂಷ ಪಡೆದು ಕುಡಿದು
ಹೆಬ್ಬಂಡೆಗಳನೆಬ್ಬಿಸುವ ಹೆಮ್ಮರದ ಹಾಗೆ
ಇಲ್ಲಿದೋ ಏಳುತಿದೆ ತರುಣಶಕ್ತಿ ||೧||
ನಾಡಿನೆದೆ ಕುಲುಮೆಯಲಿ ನವತಿದಿಯ ತುದಿಯಲ್ಲಿ
ಕುತ್ತ ಕಲುಷಗಳ ಧಗಧಗಿಸಿ ದಹಿಸಿ
ಯಜ್ಞಯಾಗಗಳ ತಪತ್ಯಾಗಗಳ ಪ್ರತಿನಿಧಿಸಿ
ಅಗ್ನಿಯಂತುರಿಯುತಿದೆ ತರುಣಶಕ್ತಿ ||೨||
ಹೆಮ್ಮೆಯಿಂದೆದೆಯೆತ್ತಿ ಹಿಮ್ಮಡಿಯ ಧರೆಗೊತ್ತಿ
ದುಷ್ಕಾಲನಾಗರನ ಹೆಡೆಯ ಮೆಟ್ಟಿ
ದಿಕ್ತಟದಿ ಹೊಂಗಿರಣದೋಕುಳಿಯ ಚಿಮ್ಮುಸುತ
ಅರುಣನಂತರಳುತಿದೆ ತರುಣಶಕ್ತಿ ||೩||
hemanth | Jun 23 2015 - 08:52
Post new comment