Raashtrada punarujjeevana
- Title: Raashtrada punarujjeevana
- Genre: Sangha
- Language: Kannada
- Length: 5:13 minutes (4.78 MB)
- Format: MP3 Stereo 44kHz 128Kbps (CBR)
If you have the lyrics (words) of this song, please send it to us by submitting it in the comments section below. Thanks!
|
ರಾಷ್ಟ್ರದ ಪುನರುಜ್ಜೀವನ ಕಾರ್ಯಕೆ, ಆತ್ಮಾಹುತಿಯಾಗಲಿ ಇಂದೇ
ತನು ಮನ ಬುದ್ಧಿ ಸ್ವಭಾವವ ತಿದ್ದುತ,
ಬದುಕುವ ರಾಷ್ಟ್ರದ ಹಿತಕೆಂದೇ ||ಪ||
ಹೃದಯ ಹೃದಯಕೆ ಹೊತ್ತಿಸಿ ಜ್ಞಾನದ ಜ್ಯೋತಿಯ ಬೆಳಗುವ ಎಂದೇ
ಜನಜಾಗೃತಿಯನು ಗೈಯ್ಯುವ ನವಯುಗ ನಿರ್ಮಾಣದ ಶುಭಕೆಂದೇ ||೧||
ಜನಜೀವನದಾ ಕಲ್ಮಶವೆಲ್ಲವ, ತೊಲಗಿಸುವಾ ನಾವಿಂದೇ
ಭರತ ಭೂಮಿಯಾ ನವತೇಜಸ್ಸನು, ತುಂಬುವ ನಾವ್ ಒಲವಿಂದೇ ||೨||
ಬಡ ಹೃದಯಕ್ಕೂ ಜೀವರಸವನು, ಬಿಡದಲೆ ಎರೆಯುವ ಇಂದೇ
ವೀರ ಪರಾಕ್ರಮ ಬಲಿದಾನಗಳಿಂ, ರಾಷ್ಟ್ರವ ಉಳಿಸುವೆವೆಂದೇ ||೩||
hemanth | May 29 2015 - 09:13
Post new comment