ರಣಮಂತ್ರದುಚ್ಛಾರ ಘನಶೌರ್ಯದೋಂಕಾರ
ಹೊರಹೊಮ್ಮುತಿಹುದಥರ್ವಣದ ಮಾರಣದ ಹೂಂಕಾರ ||ಪ||
ಪುನರುದಿತವಾಗುತಿದೆ ಮಾನಹತ ಪಾಣಿಪತ
ವಿಜಿಗೀಷು ಭಾರತಕೆ ಜಯದೊಲವ ತರಲು
ಚಾರಣರ ರಣಗಾನದನುರಣನದಾಹ್ವಾನ
ನವಚೇತನವನಿತಿಹಾಸಕೆರೆಯುತಿರಲು ||೧||
ನೆಲದೆದೆಯ ಬೇಗುದಿಯ ರುಧಿರನರ್ತನಕೆಂದು
ಕುದಿವಗ್ನಿಪರ್ವತವೆ ಬಾಯ್ದೆರೆಯೆ ಇಂದು
ಬಾಗದ ಮನೋಬಲವೆ ಭಾರತದ ಭುಜಬಲವೆ
ಕೊಡು ಸಾಕ್ಷಿ ಜಗದಕ್ಷಿ ನಿಜವರಿಯಲೆಂದು ||೨||
ಹಸಿರು ಹಳದಿಯ ಭೂತ ಸಂಕೇತದುತ್ಪಾತ
ದೆಸೆದೆಸೆಗೆ ಕಣ್ದೆಸೆಯುತಿರೆ ಧೂಮಕೇತು
ಭೂಮಿ ಭೈರವಿಯಾಗು ವ್ಯೋಮಸೀಮೆಯ ತಾಗು
ಗೋಣ್ಮುರಿದು ಬಿಸುಡು ನಶಿಸಲಿ ರಾಹು ಕೇತು ||೩||
ಪಂಚನದಿಯಧಿಜಲದಿ ಪರ್ವತದ ಹಿಮನೆಲದಿ
ಹೇಳಿ ಓ ವೈರಿಗಳೆ ಬಯಸುವಿರ ಯುದ್ಧ
ನಿದ್ದೆಯಲಿ ಮಲಗಿದ್ದ ಹಿಂದುವಿದೋ ಮೇಲೆದ್ದ
ಎಚ್ಚೆತ್ತು ಎದ್ದಿಹನು ಎಲ್ಲದಕು ಸಿದ್ಧ ! ||೪||
Tumba maduravagide mathu
Darshan | Dec 9 2015 - 14:01
Post new comment