Sanghada sasi indu



  • Title: Sanghada sasi indu
  • Genre: Sangha
  • Language: Kannada
  • Length: 4:53 minutes (4.47 MB)
  • Format: MP3 Stereo 44kHz 128Kbps (CBR)
If you have the lyrics (words) of this song, please send it to us by submitting it in the comments section below. Thanks!

AKAIK yov'ue got the answer in one!

Lyrics
ಸಂಘದ ಸಸಿಯಿದು ಹೆಮ್ಮರವಾಗಿದೆ
ಕೇಶವ ನೀನೇ ನೋಡಲು ಬಾ
ಟೊಂಗೆ ಟೊಂಗೆಯಲು ಕಂಗೊಳಿಸುತಲಿಹ
ಅಮೃತ ಫಲಗಳ ನೀಡಲು ಬಾ ||ಪ||

ಮೋಹಿತೆವಾಡದ ಅಂಗಳದಲ್ಲಿ ನೀನೇ ನೆಟ್ಟಿಹ ಸಸಿಯಂದು
ಬೆಳೆಯಿತು ಭರದಲಿ ಬೆಳೆಯುತಲಿಹುದು ಅಗಣಿತ ಶಾಖೆಗಳೈತಂದು
ಬೆಂಗಾಡನು ರಂಗೇರಿಸಿ ಬೀಸಿತು ನವಚೈತ್ಯನ್ಯದ ತಂಗಾಳಿ
ದೈನ್ಯ ನಿರಾಶೆಯ ಕಾಲವು ಕಳೆಯಿತು ಮೈಮರೆವಿನ ಪೊರೆಯನು ಸೀಳಿ ||೧||

ಅನುದಿನ ನೀರನು ಉಣಿಸುತ ನೀನು, ಜತನದಿ ಪೋಷಣೆ ಮಾಡಿರುವೆ
ದೂಷಣೆ ಪ್ರತಿರೋಧದ ಝಳದಿಂದ ಛಲದಿಂದಲಿ ಕಾಪಾಡಿರುವೆ
ಕಿರುಸಸಿಯಿದು ತರುವಾಗುತಲಿಂದು ತರುಣಾವಸ್ಥೆಯ ತಲುಪಿಹುದು
ಸಾಸಿರ ಸಾಸಿರ ಶಾಖೆಯನಾಂತು ನಾಡಿಗೆ ನೆರಳೀಯುತಲಿಹುದು ||೨||

ಎಲೆಗಳ ಮರೆಯಲಿ ನಸುನಗುತಿರುವ, ಪುಷ್ಪಗಳೆನಿತೋ ಕೇಶವನೆ
ಆ ಸುಮರಾಶಿಯು ಸೂಸಿಹ ಸೌರಭ, ಆವರಿಸಿಹುದೀ ದೇಶವನೇ
ಒಡಲೊಳು ಅಡಗಿದೆ ನಾಡಿಗೆ ನೀಡಲು ತಾಯ್ನೆಲದೊಲವಿನ ಮಕರಂದ
ಕಸವನು ರಸಮಯಗೊಳಿಸುತ ಸಾಗಿದೆ ಭಾರತದೇಶದ ಯುವವೃಂದ ||೩||

saMGada sasiyidu hemmaravAgide
kESava nInE nODalu bA
ToMge ToMgeyalu kaMgoLisutaliha
amRuta PalagaLa nIDalu bA ||pa||

mOhitevADada aMgaLadalli nInE neTTiha sasiyaMdu
beLeyitu Baradali beLeyutalihudu agaNita SAKegaLaitaMdu
beMgADanu raMgErisi bIsitu navacaityanyada taMgALi
dainya nirASeya kAlavu kaLeyitu maimarevina poreyanu sILi ||1||

anudina nIranu uNisuta nInu, jatanadi pOShaNe mADiruve
dUShaNe pratirOdhada JaLadiMda CaladiMdali kApADiruve
kirusasiyidu taruvAgutaliMdu taruNAvastheya talupihudu
sAsira sAsira SAKeyanAMtu nADige neraLIyutalihudu ||2||

elegaLa mareyali nasunagutiruva, puShpagaLenitO kESavane
A sumarASiyu sUsiha souraBa, AvarisihudI dESavanE
oDaloLu aDagide nADige nIDalu tAyneladolavina makaraMda
kasavanu rasamayagoLisuta sAgide BAratadESada yuvavRuMda ||3||

I like this song

Post new comment

The content of this field is kept private and will not be shown publicly.
  • Lines and paragraphs break automatically.

More information about formatting options