VEERA GOSHANE  • Title: VEERA GOSHANE
  • Genre: Sangha
  • Language: Kannada
  • Length: 6:29 minutes (5.95 MB)
  • Format: MP3 Stereo 44kHz 128Kbps (CBR)
If you have the lyrics (words) of this song, please send it to us by submitting it in the comments section below. Thanks!

ವೀರ ಘೋಷಣೆ ವೀರ ಗರ್ಜನೆ, ಗೈಯ್ಯೇ ವಿಜೋಯೋಪಾಸನೆ
ಶಕ್ತಿ ಇಲ್ಲದೆ ಮುಕ್ತಿ ಇಲ್ಲವು, ಇದು ಚರಿತ್ರೆಯ ಬೋಧನೇ || ವೀರ ||
ಒಬ್ಬರಾಗುತ ಒಬ್ಬ ದೇವರು, ಹುಟ್ಟಿ ಬಂದರು, ಬಂದರೂ
ಸಾಧು ಪುರುಷರು ವೀರ ಪುರುಷರು, ಬಂದು ಹೋದರು, ಹೋದರೂ
ಗೊಟ್ಟು ಮನದಲಿ ಅಟ್ಟಬಿದ್ದೆವು, ನಮ್ಮಡಿಯ ಹಿಂದೆಟ್ಟೆವು
ಹೂವು ಹಣ್ಣನು ಕೊಟ್ಟು ಅವರನು, ಮುಂದೆ ಸಾಗಿಸಿ ಬಿಟ್ಟೆವು || ವೀರ ||
ಉದ್ಧರೆ ದಾತ್ಮನಾತ್ಮಾನಂದ ನಾವೇ ಪಟಿಸಿದುದಲ್ಲವೇ
ಕೋವಿ ಕತ್ತಿಯನಿಟ್ಟು, ಸುಮ್ಮನೆ ನಾವೆ ಪೂಜಿಸಿದುದಲ್ಲವೇ
ಪೂಜೆ ಏತಕೆ ಪಟಣವೇತಕೆ, ಗೈದೆವೆಂಬುದ ಬಲ್ಲೇವೇ
ಶಸ್ತ್ರ ವೇತಕೆ ಶಾಸ್ತ್ರ ವೇತಕೆ, ಎಂಬುದನು ಮರೆತಿಲ್ಲವೇ? || ವೀರ ||
ಮೂರು ಸಾಗರ, ನೂರು ಮಂದಿರ, ದೈವ ಸಾಸಿರವಿದ್ದರೆ
ಗಂಗೆ ಇದ್ದರೆ, ಸಿಂಧುವಿದ್ದರೆ, ಗಿರಿ ಹಿಮಾಲಯವಿದ್ದರೆ
ವೇದವಿದ್ದರೆ ಭೂಮಿ ಇದ್ದರೆ, ಘನ ಪರಂಪರೆ ಇದ್ದರೆ
ಏನು ಸಾರ್ಥಕ, ಮನೆಯ ಜನರೇ ಮಲಗಿ ನಿದ್ರಿಸುತ್ತಿದ್ದರೆ? || ವೀರ ||
ಮಾತೃ ಭೂಮಿಯ ಮಕ್ಕಳಾದರೆ, ಈಗ ನಿದ್ರಿಸಲೋಲ್ಲಿರಿ
ಮೈಯ ರಕ್ತವು ಶುದ್ಧವಿದ್ದರೆ, ಈಗ ತೋರಿಸಬಲ್ಲಿರಿ
ಅಡಿಯ ಮುಂದಿದೇ ಸ್ವರ್ಗವೆನ್ನಿರಿ ಗಡಿಯನುಳಿಸಲು ಧಾವಿಸಿ
ಕಡಲನಾಳಿರೀ ನಭವನಳಿಯಿರಿ, ಯಂತ್ರ ತಂತ್ರವ ನಿರ್ಮಿಸಿ || ವೀರ ||

Post new comment

The content of this field is kept private and will not be shown publicly.
  • Lines and paragraphs break automatically.

More information about formatting options