ARADHIHA ADHRSHA ಆರದಿಹ ಆದರ್ಶ ಜ್ವಾಲೆಯ  • Title: ARADHIHA ADHRSHA
  • Genre: Sangha
  • Language: Kannada
  • Length: 6:28 minutes (5.92 MB)
  • Format: MP3 Stereo 44kHz 128Kbps (CBR)

ಆರದಿಹ ಆದರ್ಶ ಜ್ವಾಲೆಯ ಅರ್ಚಿಸುವೆ ನಾ ದಿನ ದಿನ
ಗೊಳಿಸೆ ಸಾರ್ಥಕ ಶ್ರೇಷ್ಠ ಜೀವನ ಅರ್ಪಿಸುವೆ ತನುಮನಧನ ||ಪ||

ಜ್ಞಾನ ತಪಸಿನ ಪ್ರಭೆಯ ಬೀರುತ ಸಂಜೆ ಮುಂಜಾನೆಗಳಲಿ
ನೆಲೆ ಪ್ರಶಾಂತಿಯ ಪರ್ಣಶಾಲೆಯ ಹೋಮ ಧೂಮದ ಮಡಿಲಲಿ
ಬೆಳಗಿದಗ್ನಿಯ ನೃತ್ಯ ಜ್ಯೋತಿಯ ಪ್ರತಿನಿಧಿಯೇ ಶಿರವಂದನಾ ||೧||

ರಣ ರಣಾಂಗಣದಲ್ಲಿ ಶೌರ್ಯದ ಸ್ಪೂರ್ತಿ ತೆರೆ ತೆರೆಯುಕ್ಕಿಸಿ
ದೇಶ ಧರ್ಮದ ಘನತೆ ಗೌರವ ಕೀರ್ತಿ ಕಳಶವ ರಕ್ಷಿಸಿ
ಮೆರೆದ ವೀರರ ಹೃದಯ ಪ್ರೇರಣೆ ನಮನ ಭಗವಾ ಕೇತನ ||೨||

ರವಿ ರಥಾಗ್ರದಿ ನಿತ್ಯ ಅರಳುವ ಅರುಣವರ್ಣದ ತೋರಣ
ತತ್ವ ಘನಿಸಿದ ಸತ್ವ ಸಂಪದ ಇದಮರತ್ವಕ್ಕೆ ಕಾರಣ
ರಾಷ್ಟ್ರಸೇವೆಗೆ ತ್ಯಾಗ ಕಲಿಸುವ ಧ್ಯೇಯ ಧ್ವಜದಾರಾಧನಾ ||೩||

Songs are not getting downloded. Goes to error page. Ok help

Please send the lyrics of this song for a vyakti geet - Guru Pooja

this song is one of the song which i like

Post new comment

The content of this field is kept private and will not be shown publicly.
  • Lines and paragraphs break automatically.

More information about formatting options