ಕಟ್ಟಬನ್ನಿ ತರುಣರೆ ನವಭಾರತದೇಶವ
ಸ್ವತ್ವ ಸ್ವಾಭಿಮಾನಭಾರಿತ ಶಕ್ತಿವಂತ ರಾಷ್ಟ್ರವ...ನವಭಾರತ ದೇಶವ || ||ಪ||
ಕಿತ್ತುಬಿಸುಟು ಸುತ್ತಲಿರುವ ವಿಷಮ ವಿಷದ ಕಳೆಯನು
ಬಿತ್ತಿಬೆಳೆದು ತನ್ನತನದ ಹೊನ್ನಿನಂತ ಬೆಳೆಯನು
ಚಿತ್ತದಲ್ಲಿ ಮನೆಯ ಮಾಡಿದಂಥ ಭ್ರಮೆಯ ತೊಲಗಿಸಿ
ಕತ್ತಲನ್ನು ದೂರಗೊಳಿಸಿ ಧ್ಯೇಯದೀಪ ಬೆಳಗಿಸಿ ||೧||
ಜಗಕೆ ಅನ್ನ ನೀಡಬಲ್ಲ ಸಾಮರ್ಥ್ಯ ನಮಗಿರೆ
ಕರದೊಳೇಕೆ ಭಿಕ್ಷಾಪಾತ್ರೆ ಅನ್ನಪೂರ್ಣೆ ಈ ಧರೆ
ಯಜ್ಞಯಾಗಗಳ ತಪತ್ಯಾಗಗಳ ಪ್ರತಿನಿಧಿಸಿ
ಅಗ್ನಿಯಂತುರಿಯುತಿದೆ ತರುಣಶಕ್ತಿ ||೨||
ಹೆಮ್ಮೆಯಿಂದೆದೆಯೆತ್ತಿ ಹಿಮ್ಮಡಿಯ ಧರೆಗೊತ್ತಿ
ದುಷ್ಕಾಲನಾಗರನ ಹೆಡೆಯ ಮೆಟ್ಟಿ
ದಿಕ್ತಟದಿ ಹೊಂಗಿರಣದೋಕುಳಿಯ ಚಿಮ್ಮುಸುತ
ಅರುಣನಂತರುಳುತಿದೆ ತರುಣಶಕ್ತಿ ||೩||
English Transliteration
kaTTabanni taruNare navaBAratadESava
svatva svABimAnaBArita SaktivaMta rAShTrava...
navaBArata dESava ||pa||
kittubisuTu suttaliruva viShama viShada kaLeyanu
bittibeLedu tannatanada honninaMta beLeyanu
cittadalli maneya mADidaMtha Brameya tolagisi
kattalannu dUragoLisi dhyEyadIpa beLagisi ||1||
jagake anna nIDaballa sAmarthya namagire
karadoLEke bhikShApAtre annapUrNe I dhare
yaj~jayAgagaLa tapatyAgagaLa pratinidhisi
agniyaMturiyutide taruNaSakti ||2||
hemmeyiMdedeyetti himmaDiya dharegotti
duShkAlanAgarana heDeya meTTi
diktaTadi hoMgiraNadOkuLiya cimmusuta
aruNanaMtaruLutide taruNaSakti ||3||
Meaning:
Come, youth, let’s build the new Bharata.
Let’s build such a country that possesses tremendous dignity.
Tear away the surrounding deadly poisonous weeds
Nurture the golden crop of your soul
Get rid off the illusions that you have created in your imagination
Drive away the darkness and bring out the light of your aims
We have the capability of providing food to humanity
Why do you have to beg when Annaporne herself is this earth?
You encompass the essence of Yagna Yaga and tapatyaga
The power of youth is burning in its high glory
Stand firm and proudly with pride
Destroy the malicious snakes who symbolize the evil
Spread golden rays in all directions
Like how the Sun rises, the power of the youth is soaring.
vary good songs, bluffing , is it possible to download
please tell me how
murulipandith | Dec 15 2015 - 10:56
please put this song -> samaaja devana akhanda poojege asankhya kamalagalaralutive
chandrashekar | Nov 20 2014 - 05:16
error in 1 and 2 and 3 charana. These lines doesn't belong to this song. Correct literature is as under.
ಕಟ್ಟಬನ್ನಿ ತರುಣರೆ ನವಭಾರತದೇಶವ
ಸ್ವತ್ವ ಸ್ವಾಭಿಮಾನಭಾರಿತ ಶಕ್ತಿವಂತ ರಾಷ್ಟ್ರವ...ನವಭಾರತ ದೇಶವ || ||ಪ||
ಕಿತ್ತುಬಿಸುಟು ಸುತ್ತಲಿರುವ ವಿಷಮ ವಿಷದ ಕಳೆಯನು
ಬಿತ್ತಿಬೆಳೆದು ತನ್ನತನದ ಹೊನ್ನಿನಂತ ಬೆಳೆಯನು
ಚಿತ್ತದಲ್ಲಿ ಮನೆಯ ಮಾಡಿದಂಥ ಭ್ರಮೆಯ ತೊಲಗಿಸಿ
ಕತ್ತಲನ್ನು ದೂರಗೊಳಿಸಿ ಧ್ಯೇಯದೀಪ ಬೆಳಗಿಸಿ II 1 II
ಜಗಕೆ ಅನ್ನ ನೀಡಬಲ್ಲ ಸಾಮರ್ಥ್ಯ ನಮಗಿರೆ
ಕರದೊಳೇಕೆ ಭಿಕ್ಷಾಪಾತ್ರೆ ಅನ್ನಪೂರ್ಣೆ ಈ ಧರೆ
ಗಂಗೆ ತುಂಗೆ ಹರಿವ ನೆಲದಿ ಬೇಕೆ ಹಂಗಿನರಮನೆ !
ಬೆವರು ಸುರಿಸಿ ಸಾಧಿಸೋಣ ಪ್ರಗತಿ ಸ್ವಾವಲಂಬನೆ II 2 II
ನಮ್ಮ ಸಿರಿಯ ದೋಚಲೆಂದು ಹಾಕುತಿಹರು ಹೊಂಚನು
ಸುಮ್ಮನಿರದೆ ವಿಫಲಗೊಳಿಸಿ ಬಹುರಾಷ್ಟ್ರದ ಸಂಚನು
ನಾಡನೋಡೆವ ಮಂದಿಯೊಡನೆ ಒಪ್ಪಂದ ಸಲ್ಲದು
ಸ್ವದೇಶ ನಿಷ್ಥೆಯೊಂದೆ ನಮ್ಮ ಕಾಪಾಡಬಲ್ಲದು II 3 II
ದೀನರಲ್ಲ ನಾವು ಮತಿವಿಹೀನರಲ್ಲ ಭಾರತ
ಸೋಲನೆಂದು ಒಲ್ಲೆವೆಂದು ವಿಶ್ವಕೆಲ್ಲ ಸಾರುತ
ಗ್ರಾಮಗ್ರಾಮಗಳನು ಸುತ್ತಿ ಗೈದು ಜನಜಾಗೃತಿ
ನಿರ್ಮಿಸೋಣ ಸ್ವಾಭಿಮಾನ ಸಂಪನ್ನ ಸಂಸ್ಕೃತಿ II ೪ II
Phaneendra | Jun 2 2013 - 04:58
please pass this message and this song is for all real indians
Nagaraj mourya | Jan 11 2012 - 15:11
song is highly inpirational and energetic sir...........!
Thank u very much.....
dayananda | Sep 28 2009 - 21:02
Sir,
Please translate this song in English language letters
from
Prashanth
prashanth | Nov 8 2008 - 08:41
Post new comment