Tadavadeeke taaya karege



  • Title: Tadavadeeke taaya karege
  • Genre: Sangha
  • Language: Kannada
  • Length: 6:13 minutes (5.69 MB)
  • Format: MP3 Stereo 44kHz 128Kbps (CBR)
If you have the lyrics (words) of this song, please send it to us by submitting it in the comments section below. Thanks!

More n more

ತಡವದೇಕೆ ತಾಯ ಕರೆಗೆ ಬಾಳೆ ಅವಳ ಕೊಡುಗೆ
ಅಳಿಸಬೇಕು ಅವಳ ನೋವು ತೊಡಿಸಿ ಹರುಷದುಡಿಗೆ ..||ಪ||

ಜಾರದಿರಲಿ ಸಮಯವಿನಿತು ಕ್ಷಣಿಕ ನಮ್ಮ ಬದುಕು
ಕಾಯ ಬತ್ತಿ ಧ್ಯೇಯ ಜ್ಯೋತಿ ಜಗಕೆ ಪ್ರಖರ ಬೆಳಕು
ಹಣದ ಮೋಹ ಕೀರ್ತಿ ದಾಹ ತರದೆಂದಿಗು ಮೆರಗು
ಋಣವ ಕಳೆವ ಪರಿಯೇ ಸೇವೆ ಅದುವೆ ಬಾಳ ಬೆಳಗು ..||1||

ಜನ್ಮದಾತೆ ಚರಣ ಸೇವೆ ತ್ಯಾಗಕಿಂತ ಮಿಗಿಲು
ಭೇದ ಬಿಟ್ಟು ಮೋದದಿಂದ ದುಡಿದಾಗಲೇ ಹಗಲು
ಧ್ಯೇಯ ಪಥದಿ ನೇರ ಪಯಣ ತೊರೆದು ಅರಿಗಳಂಜಿಕೆ
ಸತ್ಯ ನಿಷ್ಠೆ ಸ್ವಾಭಿಮಾನದಿಂದ ಸಫಲ ಗಳಿಕೆ ..||2||

ಯತ್ನವೆಂದು ವ್ಯರ್ಥವಲ್ಲ ಯಶದ ಹಾದಿ ಗೋಚರ
ಸ್ಫೂರ್ತಿ ಚಿಲುಮೆ ಚಿಮ್ಮುತಿರಲು ಕಾರ್ಯ ಸಿದ್ಧಿ ಸಾಸಿರ
ನಿಂದೆ ಸ್ತುತಿಗೆ ಕಿವುಡು ಮನವು ಸ್ವಾರ್ಥ ಬರದು ಹತ್ತಿರ
ಭರತ ಮಾತೆ ನಗುವಿಗಾಗಿ ಬಾಳ್ವ ಪರಿಯು ಸುಂದರ ..||3||

Incomplete song when I try top hear. Again problem occurs when I try to download the song. Please reload the song so that we can hear full song.

Post new comment

The content of this field is kept private and will not be shown publicly.
  • Lines and paragraphs break automatically.

More information about formatting options