Rana Manthraduchchaara ರಣಮಂತ್ರದುಚ್ಛಾರ

KannadaHinduism4:40

Download MP3, 4.5 MB

The song in its original script, with the Roman reading beside it.

Original, Kannada

ರಣಮಂತ್ರದುಚ್ಛಾರ ಘನಶೌರ್ಯದೋಂಕಾರಹೊರಹೊಮ್ಮುತಿಹುದಥರ್ವಣದ ಮಾರಣದ ಹೂಂಕಾರ ||ಪ

ಪುನರುದಿತವಾಗುತಿದೆ ಮಾನಹತ ಪಾಣಿಪತವಿಜಿಗೀಷು ಭಾರತಕೆ ಜಯದೊಲವ ತರಲುಚಾರಣರ ರಣಗಾನದನುರಣನದಾಹ್ವಾನನವಚೇತನವನಿತಿಹಾಸಕೆರೆಯುತಿರಲು ||೧

ನೆಲದೆದೆಯ ಬೇಗುದಿಯ ರುಧಿರನರ್ತನಕೆಂದುಕುದಿವಗ್ನಿಪರ್ವತವೆ ಬಾಯ್ದೆರೆಯೆ ಇಂದುಬಾಗದ ಮನೋಬಲವೆ ಭಾರತದ ಭುಜಬಲವೆಕೊಡು ಸಾಕ್ಷಿ ಜಗದಕ್ಷಿ ನಿಜವರಿಯಲೆಂದು ||೨

ಹಸಿರು ಹಳದಿಯ ಭೂತ ಸಂಕೇತದುತ್ಪಾತದೆಸೆದೆಸೆಗೆ ಕಣ್ದೆಸೆಯುತಿರೆ ಧೂಮಕೇತುಭೂಮಿ ಭೈರವಿಯಾಗು ವ್ಯೋಮಸೀಮೆಯ ತಾಗುಗೋಣ್ಮುರಿದು ಬಿಸುಡು ನಶಿಸಲಿ ರಾಹು ಕೇತು ||೩

ಪಂಚನದಿಯಧಿಜಲದಿ ಪರ್ವತದ ಹಿಮನೆಲದಿಹೇಳಿ ಓ ವೈರಿಗಳೆ ಬಯಸುವಿರ ಯುದ್ಧನಿದ್ದೆಯಲಿ ಮಲಗಿದ್ದ ಹಿಂದುವಿದೋ ಮೇಲೆದ್ದಎಚ್ಚೆತ್ತು ಎದ್ದಿಹನು ಎಲ್ಲದಕು ಸಿದ್ಧ ! ||೪

Roman reading
Roman transcription not available yet.

Spotted a mistake in these lyrics? Suggest a correction