The song in its original script, with the Roman reading beside it.
ರಾಷ್ಟ್ರದೇವಗೆ ಪ್ರಾಣದೀವಿಗೆ ಸೇವೆಯಾಗಲಿ ನಾಡಿಗೆಮೃತ್ಯು ಭೃತ್ಯನು ಹಿಂದುಭೂಮಿಗೆ ಮರಣ ಕಾದಿದೆ ಸಾವಿಗೆ ||ಪ
ಕೋಟಿಕೋಟಿಯ ತರುಣ ಧಮನಿಯ ರಾಷ್ಟ್ರಪ್ರೇಮದ ಸ್ರೋತದಿನಾಳದಾಳದ ನೆತ್ತರೊರೆಯುವ ದೇಶ ಧರ್ಮದ ಗಾನದಿಹೃದಯಹೃದಯವು ದುರ್ಗವಾಗಿದೆ ಅರಿಯನಳಿಸಲು ನಿಂತಿದೆಹಿಂದಿನಂತೆಯೆ ಹಿಂದು ಚೇತನವಿಂದು ಜಾಗೃತವಾಗಿದೆ ||೧
ಕಾಲಕಾಲಕೆ ಕ್ರಾಂತಿಶೂರರ ಕಣಕೆ ಕಳುಹುತ ಬೆದರದೆಹಿಂದುದೇಶದ ಯುವಜನಾಂಗದ ಧ್ಯೇಯಬಾವುಟವೇರಿದೆಹಗೆಯ ತುಳಿಯುತ ಗಗನದೆತ್ತರ ಬೆಳೆದು ನಿಲ್ಲುವ ಪೌರುಷಪ್ರಕಟವಾಗಿದೆ ರಾಷ್ಟ್ರಗೌರವ ಉಳಿಸಿ ಬೆಳೆಸುವ ಸಾಹಸ ||೨
ಹೂಣಗ್ರೀಕರ ಆಂಗ್ಲ ಮೊಗಲರ ದಹಿಸಿ ಹುಡಿಧೂಳೆಬ್ಬಿಸಿಗೆದ್ದ ನೆಲದಲಿ ಧರ್ಮವೈರಿಗೆ ಚಿರ ಸಮಾಧಿಯ ನಿರ್ಮಿಸಿಪ್ರಲಯ ರುದ್ರನ ಡಮರುವಾದನ ಶೂಲದಲಗಿನ ದರ್ಶನನಡೆಯಲಿಂದೀ ದೇವಧರೆಯಲಿ ಕಾಲಭೈರವನರ್ತನ ||೩
ಯಾವ ಮಂದೆಗು ಬಾಗೆವೆಂದಿಗು ಸ್ವಾಭಿಮಾನದ ಬಲವಿದೆಬರಲಿ ವೈರಿಯು ಗೋರಿ ಕಾದಿದೆ ಗೆದ್ದು ಬದುಕುವ ಛಲವಿದೆಬಾಳಬಲ್ಲೆವು ಆಳಬಲ್ಲೆವು ಸೋಲನೊಲ್ಲೆವು ಒಲ್ಲೆವುವಿಶ್ವವೆಲ್ಲವು ಮುನಿದು ನಿಂತರು ನಾಡನುಳಿಸಲು ಬಲ್ಲೆವು ||೪
Spotted a mistake in these lyrics? Suggest a correction